Oplus_16908288
ಗಜೇಂದ್ರಗಡ, ಜು. 4: ಮಹಿಳೆಯರ ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕನಸು ಸೇವಾ ಫೌಂಡೇಶನ್ (ರಿ), ಗಜೇಂದ್ರಗಡ ವತಿಯಿಂದ “ಕನಸಿನ ಸಂಭ್ರಮ-2026” ಹಾಗೂ ತರಬೇತಿ ಹೊಂದಿದ ಮಹಿಳೆಯರ ಸಮ್ಮಿಲನ ಕಾರ್ಯಕ್ರಮವು ಜುಲೈ 5ರಂದು ಬೆಳಿಗ್ಗೆ 10 ಗಂಟೆಗೆ ಗಜೇಂದ್ರಗಡದ ಗದಗ ರಸ್ತೆಯ ಜಗಜೀವನರಾವ್ ಸಮುದಾಯ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಸ್ವ. ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು (ಮೈಸೂರ ಸಂಸ್ಥಾನಮಠ-ಚೌಕಿಮಠ, ಗಜೇಂದ್ರಗಡ) ಹಾಗೂ ಹಜರತ್ ಸಯ್ಯದ ನಿಜಾಮುದ್ದಿನ್ ಶಾ ಅಶರಫಿ (ಟೆಕ್ಕೇದ ಬಾವಾನವರು, ಗಜೇಂದ್ರಗಡ) ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನಸು ಸೇವಾ ಫೌಂಡೇಶನ್ ಕಾರ್ಯದರ್ಶಿ ಶಂಕರ ಕೆ. ಏವೂರ ವಹಿಸಲಿದ್ದು, ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಜಿ. ಎಸ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೃಷ್ಣ ಪಾಟೀಲ, ಶೋಭಾ ಮೇಟಿ ಭಾಗವಹಿಸಲಿದ್ದು, ಗೌರವ ಅತಿಥಿಗಳಾಗಿ ಅಶೋಕ ಬಾಗಮಾರ ಉಪಸ್ಥಿತರಿರಲಿದ್ದಾರೆ.
ಉಪನ್ಯಾಸಕರಾಗಿ ವಿ. ಬಿ. ಸೋಮನಕಟ್ಟಿಮಠ ಹಾಗೂ ಲಕ್ಷ್ಮೀ ಕರ್ಲಿ ಮಹಿಳಾ ಸಬಲೀಕರಣ, ಸ್ವಾವಲಂಬನೆ ಹಾಗೂ ಸಾಮಾಜಿಕ ಅಭಿವೃದ್ಧಿ ಕುರಿತು ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅನೇಕ ಗಣ್ಯರು ಹಾಗೂ ಸಮಾಜಮುಖಿ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮಂಜುನಾಥ ರಾಠೋಡ (ಗಜೇಂದ್ರಗಡ ತಾಲೂಕು ಕಾ.ನಿ.ಪ ಅಧ್ಯಕ್ಷರು ಹಾಗೂ ವಕೀಲರು), ರಾಘವೇಂದ್ರ ಕುಲಕರ್ಣಿ (ವಿಜಯ ಕರ್ನಾಟಕ ವರದಿಗಾರರು) ಹಾಗೂ ಚನ್ನು ಸಮಗಂಡಿ (ಸತ್ಯ-ಮಿತ್ಯ ಮಾಸಪತ್ರಿಕೆ ಸಂಪಾದಕರು) ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ, ಉಪನ್ಯಾಸ, ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೊನೆಯಲ್ಲಿ ವಂದನಾರ್ಪಣೆ ನೆರವೇರಲಿದೆ. ಕಾರ್ಯಕ್ರಮದ ನಂತರ ಎಲ್ಲರಿಗೂ ಪ್ರೀತಿಯ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಕನಸು ಸೇವಾ ಫೌಂಡೇಶನ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.

