ಚರಂತಪ್ಪಜ್ಜನವರ ಜೀವನಾಧಾರಿತ ಭಕ್ತಿಪ್ರಧಾನ ಸಿನೆಮಾ ಶುಭಾರಂಭ
ಹಗರಿಬೊಮ್ಮನಹಳ್ಳಿ, ಏ.20: ತಾಲೂಕಿನ ಪವಿತ್ರ ಕ್ಷೇತ್ರ ನಂದಿಪುರದಲ್ಲಿ ‘ನಂದಿಪುರದ ನಂದಾದೀಪ’ ಎಂಬ ಭಕ್ತಿಪ್ರಧಾನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಕೃಷಿ, ಧಾರ್ಮಿಕ ಸೇವೆ ಹಾಗೂ ವಾಕ್ಸಿದ್ಧಿಯ ಮೂಲಕ ಖ್ಯಾತಿ ಪಡೆದ ಚರಂತಪ್ಪಜ್ಜನವರ ಜೀವನ ಚರಿತ್ರೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಭಕ್ತರಲ್ಲಿ ಕುತೂಹಲ ಮೂಡಿಸಿದೆ.


