ಸಂಗಾಪುರದ ರೆಸಾರ್ಟ್ನಲ್ಲಿ ಅಕ್ರಮದ ಆರೋಪಗಳ ಸರಮಾಲೆ!
ನರ್ಸಿಂಗ್ ಹೋಮ್ಗಾಗಿ ಪರಿವರ್ತಿತ ಭೂಮಿಯಲ್ಲಿ ರೆಸಾರ್ಟ್? ತನಿಖೆಗೆ ಆಗ್ರಹ
ಈಜು ತರಬೇತಿಯ ಹೆಸರಿನಲ್ಲಿ ಹಣ ವಸೂಲಿ ಆರೋಪ; ಸುರಕ್ಷತೆಗೆ ಹೊಣೆ ಯಾರು?
ಅಶೋಕ ರೆಸಾರ್ಟ್ ಸುತ್ತ ವಿವಾದದ ಸುಳಿ; ಇಲಾಖೆಗಳ ತನಿಖೆ ಯಾವಾಗ?
‘ ಕೆ.ಎಂ.ಶರಣಯ್ಯಸ್ವಾಮಿ
ಗಂಗಾವತಿ (ಕೊಪ್ಪಳ ಜಿಲ್ಲೆ): ಐತಿಹಾಸಿಕ ಹಂಪಿ ಪರಿಸರದ ಆನೇಗುಂದಿ ರಸ್ತೆಯ ಸಾಂಗಾಪುರ ಗ್ರಾಮದಲ್ಲಿರುವ ‘ನೇಚರ್ ಶಾಸ್ ಬೈ ಥಾಮಸ್ ಕುಕ್’ (ಅಶೋಕ ರೆಸಾರ್ಟ್ಸ್ – Ashoka Resorts Hampi) ಸಂಸ್ಥೆಯು ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಬೃಹತ್ ಅಕ್ರಮಗಳ ಅಡ್ಡಾಯಾಗಿ ಪರಿಣಮಿಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಾ, ಭೂಪರಿವರ್ತನೆಯ ನಿಯಮಗಳನ್ನು ಉಲ್ಲಂಘಿಸಿ ಆಡಳಿತ ಯಂತ್ರಕ್ಕೆ ಬಹಿರಂಗವಾಗಿ ಸವಾಲು ಎಸೆಯಲಾಗುತ್ತಿದೆ.
ಭೂಪರಿವರ್ತನೆ ಕಾಯ್ದೆ ಉಲ್ಲಂಘನೆ: ‘ನರ್ಸಿಂಗ್ ಹೋಮ್’ ಹೆಸರಿನಲ್ಲಿ ರೆಸಾರ್ಟ್ ಧಂದೆ!
ದಿಶಾಂಕ್ ಆ್ಯಪ್ ಹಾಗೂ ಕಂದಾಯ ಇಲಾಖೆಯ ಅಧಿಕೃತ ಭೂದಾಖಲೆಗಳ ಪ್ರಕಾರ, ಸಾಂಗಾಪುರ ಗ್ರಾಮದ ಸರ್ವೇ ನಂಬರ್ 39 (೨ ಎಕರೆ ೨೮ ಗುಂಟೆ) ಮತ್ತು ಸರ್ವೇ ನಂಬರ್ 40 (೨ ಎಕರೆ ೯ ಗುಂಟೆ) ಹಾಗೂ ಸರ್ವೇ ನಂಬರ್ 38 (೨ ಎಕರೆ ೭ ಗುಂಟೆ) ಜಮೀನುಗಳನ್ನು ‘ಆನಂದ್ ನರ್ಸಿಂಗ್ ಹೋಮ್’ (ಆಸ್ಪತ್ರೆ/ಆರೋಗ್ಯ ಸೇವೆ) ಉದ್ದೇಶಕ್ಕಾಗಿ ವೈದ್ಯಕೀಯ ಭೂಪರಿವರ್ತನೆ (Land Conversion – PRV) ಮಾಡಿಸಿಕೊಳ್ಳಲಾಗಿತ್ತು (ಮಾಲೀಕರು: ಡಾ. ಜಿ. ಶಶಿಧರ).
ಆದರೆ, ನರ್ಸಿಂಗ್ ಹೋಮ್ ನಿರ್ಮಿಸಬೇಕಿದ್ದ ಅರ್ಧಕ್ಕಿಂತ ಹೆಚ್ಚಿನ ಕೃಷಿಯೇತರ ಭೂಮಿಯನ್ನು ಕಾನೂನುಬಾಹಿರವಾಗಿ ವಾಣಿಜ್ಯ ಉದ್ದೇಶದ ಆಡಂಬರದ ರೆಸಾರ್ಟ್ (Ashoka Resorts Hampi) ಆಗಿ ಬಳಸಲಾಗುತ್ತಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ (Karnataka Land Revenue Act – Section 95) ಅಡಿಯಲ್ಲಿ ಪಡೆದ ಭೂಪರಿವರ್ತನೆಯ ಉದ್ದೇಶವನ್ನು ಸಂಪೂರ್ಣವಾಗಿ ಮರೆಮಾಚಿ, ನಿಯಮಬಾಹಿರವಾಗಿ ರೆಸಾರ್ಟ್ ನಡೆಸಿರುವುದು ಶಾಸನಬದ್ಧ ಅಪರಾಧವಾಗಿದೆ.
ಸುರಕ್ಷತೆಯಿಲ್ಲದ ಈಜು ಕೊಳ (Swimming Pool): ಜೀವಕ್ಕೆ ಕಂಟಕ!

ರೆಸಾರ್ಟ್ ಆವರಣದಲ್ಲಿ “ಸ್ವಿಮ್ಮಿಂಗ್ ಕ್ಲಾಸ್ & ಟ್ರೈನಿಂಗ್ ಕ್ಯಾಂಪ್” ಹೆಸರಿನಲ್ಲಿ ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳಿಂದ ಮಾಸಿಕ ಮತ್ತು ವಾರ್ಷಿಕ ಸದಸ್ಯತ್ವ (Membership) ನೆಪದಲ್ಲಿ ಭಾರೀ ಹಣ ವಸೂಲಿ ಮಾಡಲಾಗುತ್ತಿದೆ.
- ಲೈಫ್ಗಾರ್ಡ್ ಕೊರತೆ: ಯಾವುದೇ ಪ್ರಮಾಣೀಕೃತ ಈಜು ತರಬೇತುದಾರರು ಅಥವಾ ಜೀವರಕ್ಷಕ (Certificated Lifeguards) ಸಿಬ್ಬಂದಿ ಇಲ್ಲಿಲ್ಲ.
- ಸುರಕ್ಷತಾ ಮಾನದಂಡ ಶೂನ್ಯ: ಯಾವುದೇ ದುರಂತ ಸಂಭವಿಸಿದರೆ ತಕ್ಷಣದ ಪ್ರಥಮ ಚಿಕಿತ್ಸೆ ಅಥವಾ ತುರ್ತು ಜೀವರಕ್ಷಕ ಉಪಕರಣಗಳು ಲಭ್ಯವಿಲ್ಲದೆ, ಕೇವಲ ಲಾಭದ ಉದ್ದೇಶಕ್ಕಾಗಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ.
ಅಗ್ನಿ ಅನಾಹುತಕ್ಕೆ ಮುಕ್ತ ಆಹ್ವಾನ: ‘ಕಾಟೇಜ್ಗಳಿಗೆ ಅಗ್ನಿಶಾಮಕ ಕ್ಲಿಯರೆನ್ಸ್ ಇಲ್ಲ’
ರೆಸಾರ್ಟ್ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಒಣ ಹುಲ್ಲು ಮತ್ತು ಒಣ ಕಡ್ಡಿಗಳನ್ನು (Thatch/Straw Huts) ಬಳಸಿ ಅಕ್ರಮವಾಗಿ ಕೊಠಡಿಗಳನ್ನು (Cottages) ನಿರ್ಮಿಸಲಾಗಿದೆ.
- ಇಂತಹ ಜ್ವಾಲಾಮುಖಿ ಮಾದರಿಯ ಕೊಠಡಿಗಳಿಗೆ ಯಾವುದೇ ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ (Fire Safety NOC) ಪಡೆದಿಲ್ಲ.
- ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದರೆ ಭಾರೀ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿದ್ದು, ರಾಷ್ಟ್ರೀಯ ಕಟ್ಟಡ ಸಂಹಿತೆ (National Building Code) ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.

ಅಕ್ರಮ ಮದ್ಯ ಮಾರಾಟ & ಆಹಾರ ಕಲಬರಕೆ (FSSAI ಉಲ್ಲಂಘನೆ)
- ಅಬಕಾರಿ ಕಾಯ್ದೆ ಉಲ್ಲಂಘನೆ: ಅಬಕಾರಿ ಇಲಾಖೆಯಿಂದ (Excise Department) ಸೂಕ್ತ CL-7 ಅಥವಾ CL-9 ಪರವಾನಗಿ (License) ಪಡೆಯದೆ ಅಕ್ರಮವಾಗಿ ಮದ್ಯ ಪೂರೈಕೆ ಮತ್ತು ಮಾರಾಟ ದಂಧೆ ನಡೆಯುತ್ತಿದೆ.
- ವಿಷಪೂರಿತ ಆಹಾರ: ಪ್ರವಾಸಿಗರಿಗೆ ಮತ್ತು ಗ್ರಾಹಕರಿಗೆ ನೀಡುವ ಆಹಾರ ಪದಾರ್ಥಗಳಲ್ಲಿ ಮಿತಿಮೀರಿದ ಕೃತಕ ಬಣ್ಣ (Synthetic Food Colors) ಮತ್ತು ಆರೋಗ್ಯಕ್ಕೆ ಅಪಾಯಕಾರಿಯಾದ ಟೇಸ್ಟಿಂಗ್ ಪೌಡರ್ (Monosodium Glutamate – MSG) ಬಳಸಲಾಗುತ್ತಿದೆ. ಇದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ (FSSAI) ಅಡಿಯಲ್ಲಿ ಗಂಭೀರ ಶಿಕ್ಷಾರ್ಹ ಅಪರಾಧ.
ನಕಲಿ ಬಿಲ್ಲಿಂಗ್ ದಂಧೆ: ಕೋಟ್ಯಂತರ ರೂ. ಜಿ.ಎಸ್.ಟಿ (GST) ತೆರಿಗೆ ವಂಚನೆ!
ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿರುವ ಬಿಲ್ಗಳಲ್ಲಿ ಜಿ.ಎಸ್.ಟಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದ್ದು, ನಕಲಿ ಜಿ.ಎಸ್.ಟಿ ಬಿಲ್ಲುಗಳನ್ನು ಸೃಷ್ಟಿಸಿ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ (Tax Evasion) ಮಾಡಲಾಗುತ್ತಿದೆ.
🔍 ತಕ್ಷಣದ ಅಗತ್ಯ ಕಾನೂನು ಕ್ರಮಗಳು:
- ಕಂದಾಯ ಇಲಾಖೆ (Revenue Dept): ಭೂಪರಿವರ್ತನೆ ಉಲ್ಲಂಘನೆ ಹಿನ್ನೆಲೆಯಲ್ಲಿ KLR Act Section 96 ರ ಅಡಿಯಲ್ಲಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
- ವಾಣಿಜ್ಯ ತೆರಿಗೆ ಇಲಾಖೆ (Commercial Tax/GST): ನಕಲಿ ಜಿ.ಎಸ್.ಟಿ ಬಿಲ್ ನೀಡುತ್ತಿರುವ ಆಡಳಿತ ಮಂಡಳಿಯ ಮೇಲೆ ತಕ್ಷಣ ದಾಳಿ ನಡೆಸಿ ಶೋಧಿಸಬೇಕು.
- ಅಬಕಾರಿ & ಆಹಾರ ಸುರಕ್ಷತಾ ಇಲಾಖೆ (Excise & FSSAI): ಅಕ್ರಮ ಮದ್ಯ ಮಾರಾಟವನ್ನು ತಡೆದು, ಅಪಾಯಕಾರಿ ಆಹಾರದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
- ಪೋಲಿಸ್ & ಜಿಲ್ಲಾಡಳಿತ: ಸಾರ್ವಜನಿಕರ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತಿರುವ ಈಜು ಕೊಳ ಮತ್ತು ಅಗ್ನಿ ಸುರಕ್ಷತೆಯಿಲ್ಲದ ಕಾಟೇಜ್ಗಳನ್ನು ತಕ್ಷಣವೇ ಸೀಲ್ಡೌನ್ (Seal Down) ಮಾಡಬೇಕಿದೆ.

ಸಂಬಂಧಪಟ್ಟ ಇಲಾಖೆಗಳು ಮೌನ ಮುರಿಯುವುವೇ?
ಒಂದೇ ಸ್ಥಳಕ್ಕೆ ಸಂಬಂಧಿಸಿದಂತೆ ಭೂ ಬಳಕೆ, ಕಟ್ಟಡ ಅನುಮತಿ, ಪ್ರವಾಸೋದ್ಯಮ ಚಟುವಟಿಕೆ, ಈಜುಕೊಳದ ಸುರಕ್ಷತೆ, ಅಬಕಾರಿ ಪರವಾನಗಿ, ಅಗ್ನಿ ಸುರಕ್ಷತೆ ಹಾಗೂ ಆಹಾರ ಗುಣಮಟ್ಟದ ಕುರಿತು ಕೇಳಿಬಂದಿರುವ ಆರೋಪಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ.
ಜಿಲ್ಲಾಡಳಿತ, ಕಂದಾಯ ಇಲಾಖೆ, ಸ್ಥಳೀಯ ಯೋಜನಾ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ, ದಾಖಲೆಗಳ ಪರಿಶೀಲನೆಯೊಂದಿಗೆ ನಿಷ್ಪಕ್ಷಪಾತ ತನಿಖೆ ಕೈಗೊಳ್ಳಬೇಕು.
ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಸಾಕ್ಷ್ಯವಿಲ್ಲದೆ ತೀರ್ಮಾನಕ್ಕೆ ಬಾರದಂತೆ ತನಿಖೆಯ ವರದಿಯನ್ನು ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ಮಂಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ: ವಿಶೇಷ ತನಿಖಾ ತಂಡ ಕೆ.ಎಂ.ಶರಣಯ್ಯಸ್ವಾಮಿ (Investigation Desk)

