ಲಿಂಗಸುಗೂರು___ ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯತಿಯ ಕಾರ್ಯಾಲಯದ ವ್ಯಾಪ್ತಿಯ ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ನಿಗದಿತ ಸಮಯದಲ್ಲಿ ಪೂರೈಕೆಗಾಗಿ ಕರವೇ ಸ್ವಾಭಿಮಾನಿ ಸೇನೆ ಗ್ರಾಮ ಘಟಕ ಹಾಗೂ ತಾಲೂಕು ಘಟಕ ಸಂಯುಕ್ತದೊಂದಿಗೆ ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಕಾರ್ಯ ಮತ್ತು ಪಾಲನೆ ಉಪವಿಭಾಗ ಜೆಸ್ಕಾಂ ಲಿಂಗಸಗೂರು ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಇಂದು ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಬಿಯಂತರರು ಕಾರ್ಯ ಮತ್ತು ಪಾಲನೆ ಉಪವಿಭಾಗ ಜೆಸ್ಕಾಂ ಲಿಂಗಸೂಗೂರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಲಿಂಗಸೂಗೂರ್ ತಾಲೂಕಿನ ಪೖದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸುಮಾರು ಏಳು ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಗ್ರಾಮಸ್ಥರು ಹಲವು ದಿನಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಈ ಹಿಂದೆ ಸಂಜೆ ಆರು ಗಂಟೆಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು ಆದರೆ ಇತ್ತೀಚಿಗೆ ರಾತ್ರಿ 8:00 ಗಂಟೆ ನಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿರುವುದರಿಂದ ವಿದ್ಯಾರ್ಥಿಗಳು ರೈತರು ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಪ್ರಸ್ತುತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು ಸಂಜೆ ಸಮಯದಲ್ಲಿ ವಿದ್ಯುತ್ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಓದು ಹಾಗೂ ಪರೀಕ್ಷಿಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈಗಾಗಲೇ ಹಲವು ಸೌಲಭ್ಯಗಳ ಕೊರತೆಯ ನಡುವೆ ಶಿಕ್ಷಣ ಪಡೆಯುತ್ತಿದ್ದಾರೆ ಇಂಥ ಸಂದರ್ಭದಲ್ಲಿ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಗುವಂತಹ ಶೈಕ್ಷಣಿಕ ವಾತಾವರಣ ಗ್ರಾಮೀಣ ವಿದ್ಯಾರ್ಥಿಗಳಿಗೆ ದೊರೆಯದಂತಾಗಿದೆ ವಿದ್ಯುತ್ ಪೂರೈಕೆಯಲ್ಲಿನ ಈ ವ್ಯತ್ಯಯದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುವ ಸಾಧ್ಯತೆಯಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ತೊಂದರೆಯಾಗುತ್ತಿದೆ ಇದಲ್ಲದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡಗಾಡು ಪ್ರದೇಶವಾಗಿದ್ದು ರಾತ್ರಿ ಸಮಯದಲ್ಲಿ ವಿಷ ಜಂತುಗಳ ಹಾವಳಿ ಹೆಚ್ಚಾಗಿರುತ್ತವೆ ಕತ್ತಲಿನ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಸಂಚರಿಸುವುದು ಅಪಾಯಕಾರಿಯಾಗಿದ್ದು ಹಾವು ಚೇಳು ಸೇರಿದಂತೆ ವಿಷ ಜಂತುಗಳ ಕಡಿತದಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ ವಿದ್ಯುತ್ ಕೊರತೆಯಿಂದ ಗ್ರಾಮಸ್ಥರ ಸುರಕ್ಷತೆಗೂ ದಕ್ಕೆಯಾಗುತ್ತೆ ಇಂತಹ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದರ ಹೊಣೆಗಾರಿಕೆ ಯಾರದ್ದು ಎಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ ಈ ಕುರಿತು ಸಂಬಂಧ ಪಟ್ಟ ಸೆಕ್ಷನ್ ಅಧಿಕಾರಿಗಳನ್ನು ಗ್ರಾಮಸ್ಥರು ವಿಚಾರಿಸಿದಾಗ ಮೇಲಾಧಿಕಾರಿಗಳು ನೀಡಿರುವ ಆದೇಶದಂತೆ ಕೆಲಸ ಮಾಡುತ್ತಿದ್ದೇವೆ ನೀವು ಹೇಳಿದಂತೆ ನಾನು ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸುತ್ತಿರುವುದಲ್ಲದೆ ಸಮಸ್ಯೆ ಕುರಿತು ಪ್ರಶ್ನಿಸುವ ಗ್ರಾಮಸ್ಥರಿಗೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಆದ್ದರಿಂದ ಮಾನ್ಯ ಸಹಾಯಕ ಆಯುಕ್ತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಜೆಸ್ಕಾಂಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಪೖದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳಿಗೆ ಇಂದಿನಂತೆ ಸಂಜೆ ಆರು ಗಂಟೆಯಿಂದಲೇ ಸಮರ್ಪಕ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ವಿಶೇಷವಾಗಿ ವಿದ್ಯಾರ್ಥಿಗಳ ಅರ್ಧವಾರ್ಷಿಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆಗೆ ಆದ್ದತಿ ನೀಡಬೇಕು ಜೊತೆಗೆ ಗುಡ್ಡಗಾಡು ಪ್ರದೇಶದ ಗ್ರಾಮಸ್ಥರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಪೂರೈಕೆಯಲ್ಲಿ ಅನಗತ್ಯ ವ್ಯತ್ಯಯವಾಗದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ವಿದ್ಯುತ್ ಪೂರೈಕೆ ವೇಳಾಪಟ್ಟಿಹಾಗು ಸಮಸ್ಯೆಗೆ ಕಾರಣಗಳು ಕುರಿತು ಗ್ರಾಮಸ್ಥರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿರುತ್ತಾರೆ . ಈ ಸಂದರ್ಭದಲ್ಲಿ ಕರವೇ
ತಾಲೂಕ ಅಧ್ಯಕ್ಷ ಜಿಲಾನಿ ಪಾಶ ಲಿಂಗಸುಗೂರು ಗ್ರಾಮ ಘಟಕ ಅಧ್ಯಕ್ಷರು ಪ್ರಭುಗೌಡ ಪಾಟೀಲ್ ಗೌರವ್ಯಾಧ್ಯಕ್ಷರು ಮುದುಕಪ್ಪ ಗುರಿಕಾರ್ ಅಜೀದ್ ಪಾಷಾ ರವಿಕುಮಾರ್ ಬರಗುಡಿ ಗೋಪಾಲಪ್ಪ ಹನುಮಪ್ಪ ಸುರ್ಪುರ್ ಹನುಮಂತ ರಾಯನ್ ಕೆರೆ ಹನುಮಂತ ಕಬ್ಬೀರ್ ಭೀಮಣ್ಣ ಕಂಬಾರ್ ಸಾಬಣ್ಣ ಯರಜಂತಿ ಚಂದ್ರು ಎಲ್ಲಿದೊಡ್ಡಿ ತಾಂಡ ಬಸ್ಸಪ್ಪ ಮೂಗಿನಾಳ ರಂಗಪ್ಪ ಅಂಬಪ್ಪ ಗೌಡ ಮುತ್ತಣ್ಣ ಬುಳ್ಳಯ್ಯ ಪೂಜಾರಿ ಅಂಬರೀಶ ಭೂಪುರ ಚಂದ್ರು ಗದ್ದಿತಾಂಡ ಮುದುಕಪ್ಪ ಗುರಿಕಾರ್ ಇನ್ನಿತರರು ಇದ್ದರು


