ಜಿಲ್ಲಾಧ್ಯಕ್ಷ ರಾಜೂ ಕುರಡಗಿ ಅವರಿಗೆ ಮನವಿ ಸಲ್ಲಿಕೆ; ಟಿಕೆಟ್ ನೀಡುವಂತೆ ಅಭಿಮಾನಿಗಳ ಆಗ್ರಹ
ಗದಗವಾಣಿ ಸುದ್ದಿ | ಕಳಸಾಪೂರ
ಹುಲಕೋಟಿ ಜಿಲ್ಲಾ ಪಂಚಾಯತ ಮತಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಳಸಾಪೂರ ಗ್ರಾಮದ ನಿಂಗಯ್ಯ ಇಟಗಿಮಠ ಅವರಿಗೆ ಪಕ್ಷದ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜೂ ಕುರಡಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಂಬರುವ ಜಿಲ್ಲಾ ಪಂಚಾಯತ ಚುನಾವಣೆಯ ಹಿನ್ನೆಲೆಯಲ್ಲಿ ಹುಲಕೋಟಿ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಆಕಾಂಕ್ಷಿಯಾಗಿರುವ ನಿಂಗಯ್ಯ ಇಟಗಿಮಠ ಅವರಿಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಅವರ ಅಭಿಮಾನಿಗಳ ಬಳಗ ಒತ್ತಾಯಿಸಿತು. ಪಕ್ಷದ ವರಿಷ್ಠರು ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಪರಿಗಣಿಸಿ, ನಿಂಗಯ್ಯ ಇಟಗಿಮಠ ಅವರಿಗೆ ಟಿಕೆಟ್ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಯಲ್ಲಪ್ಪ ಅಡ್ನೂರ, ಬಸಯ್ಯ ಸಾಸ್ವಿಹಳ್ಳಿಮಠ, ಈರಯ್ಯಸ್ವಾಮಿ, ಮಂಜುನಾಥ ಹಾದಿಮನಿ, ಮಲ್ಲೇಶ ದುಂಡೂರ, ಕುಮಾರ ಕೌಜಗೇರಿ, ಬಸವರಾಜ ಸಾಸ್ವಿಹಳ್ಳಿಮಠ ಸೇರಿದಂತೆ ಆನಂದಯ್ಯ ಇಟಗಿಮಠ ಅವರ ಅಭಿಮಾನಿಗಳು ಹಾಗೂ ಇತರರು ಉಪಸ್ಥಿತರಿದ್ದರು.

